Skip to content
Home » Neenaade Naa Song Lyrics In Kannada

Neenaade Naa Song Lyrics In Kannada

Neenaade Naa Song Lyrics In KannadaShreya Ghoshal, Armaan Malik & Thaman S Lyrics

 

SingerShreya Ghoshal, Armaan Malik & Thaman S
SingerThaman S
MusicThaman S
Song WriterGhouse Peer

ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೇ ಇಲ್ಲ
ಏನು ಇದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೇ ಯೋಚನೆ

ಇಬ್ಬರಲ್ಲ ಒಬ್ಬರೀಗ
ನಾನಿನ್ನು ನಿನಗರ್ಪಣೆ

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!

ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ

ನೀನು ದೂರ ನಾನು ದೂರ
ಆದರೂ ಇಲ್ಲೇ ಈ ಕ್ಷಣದಲ್ಲೇ
ತಿರುಗುವ ಭುವಿಯಲ್ಲಿ
ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ

ಎದೆಯ ಬಡಿತ ಹೃದಯ ತುಂಬಿ
ಉಸಿರಾಡುವಾಗ ವಿಪರೀತವೀಗ
ಒಂಟಿತನಕೆ ನೀನೆ ತಾನೇ
ಸರಿಯಾದ ಸಿಹಿಯಾದ ಪರಿಹಾರ ಈಗ

ಉಕ್ಕಿ ಬರುವ ಅಕ್ಕರೆಗೆ
ನಿನ್ನ ನೆರಳೆ ಉತ್ತರ
ಯಾವ ದೃಷ್ಟಿ ತಾಕದಂತೆ
ನಿನ ಕಣ್ಣೇ ನನ ಕಾವಲು

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!

ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೇ ಇಲ್ಲ
ಏನು ಇದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೇ ಯೋಚನೆ

ಇಬ್ಬರಲ್ಲ ಒಬ್ಬರೀಗ
ನಾನಿನ್ನು ನಿನಗರ್ಪಣೆ

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!